Posts

Showing posts from February, 2019

ಅಪ್ಪುವಿನ ಫ್ಯಾಮಿಲಿ ಬೌಂಡರಿ ಮತ್ತು ನಟಸಾರ್ವಭೌಮ

Image
"ನಟಸಾರ್ವಭೌಮ"ದಲ್ಲಿ ಅಪ್ಪು ನಿರಾಸೆ ಮಾಡಲ್ಲ. ಅವರ ಆಕ್ಟಿಂಗ್, ಫೈಟ್ ಮತ್ತು ಡ್ಯಾನ್ಸಲ್ಲಿ ಅದೇ ಅಪ್ಪುಯಿಸಂ ಜಾರಿಯಲ್ಲಿದೆ. ಡ್ಯಾನ್ಸ್ ಕಾರಣಕ್ಕೆ ಒಂದ್ಸಲ ನೋಡಿದ್ರೆ ತೊಂದ್ರೆ ಏನಿಲ್ಲ. ಅಪ್ಪು ಒಂದು ಬೌಂಡ್ರಿ ಹಾಕ್ಕೊಂಡೇ ಸಿನಿಮಾ ಮಾಡೋದು. ಅದು ಫ್ಯಾಮಿಲಿ ಆಡಿಯನ್ಸ್ ಅನ್ನೋ ಬೌಂಡರಿ. ಅಂತವರಿಗೆ ಖಂಡಿತ ಖುಷಿ ಕೊಡ್ತಾರೆ. ಆದ್ರೆ ಪವನ್ ಒಡೆಯರ್ ನಿರಾಸೆ ಮಾಡ್ತಾರೆ. ಸಿನಿಮಾಗೆ ಹೆಸರಿಟ್ಟು, ಟ್ರೈಲರ್ ಬಿಟ್ಟಾಗ್ಲೆ ಇದು ಪಾತ್ರದೊಳಗಿನ ಪಾತ್ರ ಅನ್ನೋ ಸಸ್ಪೆನ್ಸ್ ಗೊತ್ತಾಗುತ್ತೆ. ಸಿನಿಮಾದಲ್ಲಿ ಸಸ್ಪೆನ್ಸ್ ಅನ್ನೋದೆ ಉಳಿದಿಲ್ಲ. ಪಿ.ವಾಸುನಾದ್ರೂ ಮತ್ತೊಂದು ಆಪ್ತಮಿತ್ರ, ಶಿವಲಿಂಗ ಥರ ಮಾಡ್ತಿದ್ರು. ಪವನ್‌ಗೆ ಫೋಟೋ ಜರ್ನಲಿಸ್ಟ್‌ಗೂ, ಜರ್ನಲಿಸ್ಟ್‌ಗೂ ವ್ಯತ್ಯಾಸ ಗೊತ್ತಿಲ್ಲ ಅನ್ಸತ್ತೆ. ಪೋಸ್ಟರಗಳಲ್ಲಿ ದೊಡ್ಡ ಕ್ಯಾಮರಾ ಹಿಡ್ಕೊಂಡ್ ಫೋಸ್ ಕೊಡ್ತಾರೆ ಪುನೀತ್. ಸಿನಿಮಾದಲ್ಲಿ ಒಂದು ಫೋಟೋನೂ ತೆಗಿಯಲ್ಲ. ಬರೀ ಫೋಸಸ್ಟೆ. ಚಿಕ್ಕಣ್ಣ ಇರೋದ್ರಿಂದ ಫಸ್ಟ್ ಆಫಲ್ಲಿ ನಗುವಿಗೇನು ಕೊರತೆಯಿಲ್ಲ. ಡಿ.ಇಮಾನ್ ಸಂಗೀತ ಯಾವುದು ನೆನಪಲ್ಲಿ ಉಳಿಯೋ ಥರ ಇಲ್ಲ. ಯೋಗರಾಜ್ ಭಟ್ ಮತ್ತು ಪನೀತ್ ಡ್ಯಾನ್ಸ್ ಕಾರಣಕ್ಕೆ 'ಒಪನ್ ದ ಬಾಟಲ್' ಸಾಂಗ್ ಚೆನ್ನಾಗಿದೆ ಅನ್ಸತ್ತೆ. ರಚಿತಾ ರಾಮ್ ಆಟಕ್ಕುಂಟು ಲೆಕ್ಕಕ್ಕಿಲ್ಲ. ಅನುಪಮಾ ಪರಮೇಶ್ವರನ್ ಕಣ್ಣು ತಂಪ್ ಮಾಡ್ತಾರೆ. ಲವ್ವರ್ ಬಾಯ್ ಪುನೀತ್ ಜೊತೆ ಕೆಮಿಸ್ಟ್ರಿ ಒಂದಿಷ್ಟು ಚೆನ್ನಾಗಿದೆ. ...