ಅಪ್ಪುವಿನ ಫ್ಯಾಮಿಲಿ ಬೌಂಡರಿ ಮತ್ತು ನಟಸಾರ್ವಭೌಮ

"ನಟಸಾರ್ವಭೌಮ"ದಲ್ಲಿ ಅಪ್ಪು ನಿರಾಸೆ ಮಾಡಲ್ಲ. ಅವರ ಆಕ್ಟಿಂಗ್, ಫೈಟ್ ಮತ್ತು ಡ್ಯಾನ್ಸಲ್ಲಿ ಅದೇ ಅಪ್ಪುಯಿಸಂ ಜಾರಿಯಲ್ಲಿದೆ. ಡ್ಯಾನ್ಸ್ ಕಾರಣಕ್ಕೆ ಒಂದ್ಸಲ ನೋಡಿದ್ರೆ ತೊಂದ್ರೆ ಏನಿಲ್ಲ. ಅಪ್ಪು ಒಂದು ಬೌಂಡ್ರಿ ಹಾಕ್ಕೊಂಡೇ ಸಿನಿಮಾ ಮಾಡೋದು. ಅದು ಫ್ಯಾಮಿಲಿ ಆಡಿಯನ್ಸ್ ಅನ್ನೋ ಬೌಂಡರಿ. ಅಂತವರಿಗೆ ಖಂಡಿತ ಖುಷಿ ಕೊಡ್ತಾರೆ.

ಆದ್ರೆ ಪವನ್ ಒಡೆಯರ್ ನಿರಾಸೆ ಮಾಡ್ತಾರೆ. ಸಿನಿಮಾಗೆ ಹೆಸರಿಟ್ಟು, ಟ್ರೈಲರ್ ಬಿಟ್ಟಾಗ್ಲೆ ಇದು ಪಾತ್ರದೊಳಗಿನ ಪಾತ್ರ ಅನ್ನೋ ಸಸ್ಪೆನ್ಸ್ ಗೊತ್ತಾಗುತ್ತೆ. ಸಿನಿಮಾದಲ್ಲಿ ಸಸ್ಪೆನ್ಸ್ ಅನ್ನೋದೆ ಉಳಿದಿಲ್ಲ. ಪಿ.ವಾಸುನಾದ್ರೂ ಮತ್ತೊಂದು ಆಪ್ತಮಿತ್ರ, ಶಿವಲಿಂಗ ಥರ ಮಾಡ್ತಿದ್ರು. ಪವನ್‌ಗೆ ಫೋಟೋ ಜರ್ನಲಿಸ್ಟ್‌ಗೂ, ಜರ್ನಲಿಸ್ಟ್‌ಗೂ ವ್ಯತ್ಯಾಸ ಗೊತ್ತಿಲ್ಲ ಅನ್ಸತ್ತೆ. ಪೋಸ್ಟರಗಳಲ್ಲಿ ದೊಡ್ಡ ಕ್ಯಾಮರಾ ಹಿಡ್ಕೊಂಡ್ ಫೋಸ್ ಕೊಡ್ತಾರೆ ಪುನೀತ್. ಸಿನಿಮಾದಲ್ಲಿ ಒಂದು ಫೋಟೋನೂ ತೆಗಿಯಲ್ಲ. ಬರೀ ಫೋಸಸ್ಟೆ.

ಚಿಕ್ಕಣ್ಣ ಇರೋದ್ರಿಂದ ಫಸ್ಟ್ ಆಫಲ್ಲಿ ನಗುವಿಗೇನು ಕೊರತೆಯಿಲ್ಲ. ಡಿ.ಇಮಾನ್ ಸಂಗೀತ ಯಾವುದು ನೆನಪಲ್ಲಿ ಉಳಿಯೋ ಥರ ಇಲ್ಲ. ಯೋಗರಾಜ್ ಭಟ್ ಮತ್ತು ಪನೀತ್ ಡ್ಯಾನ್ಸ್ ಕಾರಣಕ್ಕೆ 'ಒಪನ್ ದ ಬಾಟಲ್' ಸಾಂಗ್ ಚೆನ್ನಾಗಿದೆ ಅನ್ಸತ್ತೆ. ರಚಿತಾ ರಾಮ್ ಆಟಕ್ಕುಂಟು ಲೆಕ್ಕಕ್ಕಿಲ್ಲ. ಅನುಪಮಾ ಪರಮೇಶ್ವರನ್ ಕಣ್ಣು ತಂಪ್ ಮಾಡ್ತಾರೆ. ಲವ್ವರ್ ಬಾಯ್ ಪುನೀತ್ ಜೊತೆ ಕೆಮಿಸ್ಟ್ರಿ ಒಂದಿಷ್ಟು ಚೆನ್ನಾಗಿದೆ.

ಈ ಸಿನಿಮಾದ ವಿಶೇಷತೆ ಮತ್ತು ಮೆಚ್ಚುವಂತದ್ದು ಏನಂದ್ರೆ ಬೇರೆ ಸಿನಿಮಾಗಳ ಥರ ದೆವ್ವ ಇದೆ, ಶಾಂತಿ ಮಾಡಿಸ್ಬೇಕು ಅನ್ನೋ ವಿಷಯಕ್ಕೆ ಬ್ರೇಕ್ ಬಿದ್ದಿದೆ. ಇದೆಲ್ಲಾ ಅಪ್ಪುನೇ ಕಂಕ್ಲೂಷನ್ ಕೊಡ್ತಾರೆ. ಕೊನೆಗೆ ಆ ವಿಷಯದಲ್ಲಿ ಪವನ್ ಒಡೆಯರ್‌ನ ಮೆಚ್ಬೇಕು‌.

'ರಾಕ್ಷಸನ್' ಅಂತ ತಮಿಳು ಸಿನಿಮಾಗಳನ್ನ ನೋಡೋ ನಾವು.  ಕೆಜಿಎಫ್ ಇಂಡಿಯಾ ಪೂರ್ತಿ ಸೌಂಡ್ ಮಾಡ್ತಿರೋವಾಗ, KFIನ ಎಲ್ರೂ ತಿರುಗಿ ನೋಡ್ತಿರೋವಾಗ, ಯಾವುದೇ ಸಾಮಾನ್ಯ ಸಿನಿಮಾದ ಟ್ರೈಲರ್, (ಆದಿ ಲಕ್ಷ್ಮಿ ಪುರಾಣ etc), ಸಾಂಗ್ಸ್ YouTubeಲಿ ಟ್ರೆಂಡಿಂಗಲ್ಲಿ ನಂ 1 ಇರ್ತವೆ. ಅದು ಸಾಧ್ಯ ಮಾಡಿದ್ದು ಕೆಜಿಎಫ್.❤ ಅಪ್ಪುವಿನಂತ ನ್ಯಾಷನಲ್ ಅವಾರ್ಡ್ ವಿನ್ನರ್‌ ಆಕ್ಟರ್‌ನ ಇಟ್ಕೊಂಡು ಅದ್ಯಾಕಿಷ್ಟು ಕಳಪೆ ಚಿತ್ರ ಕೊಡ್ತಿದಾರೆ ಅನ್ಸತ್ತೆ.

ಪ್ರಜಾವಾಣಿ ಕೆಜಿಎಫ್‌ ಮತ್ತು ನಟಸಾರ್ವಭೌಮಗೆ ಸರಿಯಾದ ವಿಮರ್ಶೆ ಬರ್ದಿದೆ. ಬೆಂಗಳೂರು ಮಿರರ್ KGFಗೆ 2.5 ಕೊಟ್ಟು ಬೈದಿದ್ರು. ಇದಕ್ಕೆ 3.5 ಕೊಟ್ಟಿದೆ‌ ಹೊಗಳಿದೆ. (ಹೋಲಿಕೆ ಶುರುವಾಗಿದ್ದು 525 to 550 Show ಇಟ್ಟಾಗ್ಲೆ ಶುರುವಾಯ್ತು. ನಾನೇನ್ ಹೊಸದಾಗಿ ಹೇಳ್ತಿಲ್ಲ. ಮತ್ತು ಕೆಜಿಎಫ್ ಬಂದಾಗಿನಿಂದ ಕೆಜಿಎಫ್ ಮುಂಚೆ ಮತ್ತು‌ ನಂತರ ಹೋಲಿಕೆ ಆಗೆ ಆಗುತ್ತೆ.  ಅದನ್ನ ತಡೆಯೊಕಂತೂ ಆಗಲ್ಲ. )

ಇಷ್ಟೆಲ್ಲಾ ಇದ್ರು ನಟಸಾರ್ವಭೌಮ ಹಿಟ್ ಆಗುತ್ತೆ ಕಾರಣ ಅಪ್ಪು. ಡ್ಯಾನ್ಸ್, ಆಕ್ಟಿಂಗ್ ಮತ್ತು ಅಪ್ಪುವಿನ ಎನರ್ಜಿ ಗೆಲ್ಸುತ್ತೆ.

Comments

Popular posts from this blog

ಕ್ವಾರಂಟೈನ್ ಡೇಸ್..

ಸಾರ್ವಜನಿಕ ವೇದಿಕೆ ಮತ್ತು ಗೌರವ

ಹಿಂದಿ ಮತ್ತು ಪರಿಯೇರುಮ್ ಪೆರುಮಾಳ್