Posts

Showing posts from 2024

ಸಾರ್ವಜನಿಕ ವೇದಿಕೆ ಮತ್ತು ಗೌರವ

ಎಲ್ಲರೂ ಮನೆಲಿ, ನಮ್ಮಗಳ ಸರ್ಕಲ‌್‌ಗಳಲ್ಲಿ ಎಲ್ಲಾ ನಟರನ್ನ ಏಕ ವಚನದಲ್ಲೇ ಕರೆಯೋದು.. ಸುದೀಪ್ ಬಿಗ್ಬಾಸಲ್ಲಿ ಬೈದ್ನಂತೆ, ದರ್ಶನ್ ಜೈಲಿಗೆ ಹೋದ್ನಂತೆ, ಶಾರುಕ್ ಎಷ್ಟು ಚಂದ ಇದಾನೆ ಅಲ್ವ. ಶಿವಣ್ಣ ಈಗ್ಲೂ ಹುಡ್ಗ ಇದ್ದಂಗಿದಾನೆ ಅಲ್ವ? ರಾಜ‌ಕುಮಾರ್ ಕೈ ಚಾಕು ಥರ ಮಾಡ್ಕೊಂಡು ಪ್ರಭಾಕರ್‌ಗೆ ಕುತ್ಗೆ ಮೇಲೆ ಹೊಡ್ದಿದ್ಕೆ ಬಿದ್ದೋದ. ಇದೆಲ್ಲಾ ಕಾಮನ್‌‌. ಆದ್ರೆ ಸಾರ್ವಜನಿಕ ವೇದಿಕಗೆಳಲ್ಲಿ ಒಂದಿಷ್ಟು ಗೌರವ ಕೊಟ್ಟೆ ಮಾತಾಡೋಣ. ರಾಘವೇಂದ್ರ ರಾಜ್‌ಕುಮಾರ್ ಸುವರ್ಣದಲ್ಲಿ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ "ನೋಡಿ" ಅಪ್ಪು ಅನ್ನೋರು ಪುನೀತ್ವ್ರನ್ನ, ರಮೇಶ್ ಅರವಿಂದವ್ರು ಸಹ ವೀಕೆಂಡ್ ವಿತ್ ರಮೇಶಲ್ಲಿ ಅಪ್ಪುನ "ಪುನೀತ್ ಸರ್" ಅಂದ್ರು. ವಿಜಯ್ ರಾಘವೇಂದವ್ರು ಖಾಸಗಿಯಾಗಿ ಅಪ್ಪು ಮಾಮ ಅಂತಾರೆ, ವೇದಿಕೆಗಳಲ್ಲಿ ಪುನೀತವ್ರೆ ಅಂತಾರೆ. ಇವ್ರೆಲ್ಲಾ ವಯಸ್ಸಲ್ಲಿ ದೊಡ್ಡವರಾದ್ರೂ ಚಿಕ್ಕವರಿಗೂ ಗೌರವ ಕೊಡ್ರಿದ್ರು. (ವಿಜಯ್‌ ಬಿಟ್ಟು) ಕೆಲವರಿಗೆ ಗೌರವ ಕೊಡ್ಲೇ ಬೇಕಿಲ್ಲ ಕರೆಯೋ ರೀತಿಲೇ ಗೌರವ ಬಂದಿರುತ್ತೆ.. ರಾಜ್ ಫ್ಯಾನ್ಸ್ ಅಣ್ಣಾವ್ರು ಅಂದ್ರೆನೇ ಖುಷಿ, ಶಿವಣ್ಣ, ರಾಘಣ್ಣ ಅಂತ ಪ್ರತಿಯೊಬ್ಬರೂ ಕರೀತಾರೆ. ವಿಷ್ಟುಅವರನ್ನ ಅಪ್ಪಾಜಿ, ಯಜಮಾನ ಅಂತಾನೂ ಕರಿತಾರೆ. ಅಂಬರೀಶವ್ರನ್ನ ಪ್ರೀತಿಯಿಂದ ಅಂಬಿ ಅಂತಾರೆ, ಅಂಬಿ ಅಂದ ಮಾತ್ರಕ್ಕೆ ಗೌರವ ಇಲ್ಲ ಅಂತಲ್ಲ. ವೇದಿಕೆಗಳಲ್ಲಿ ಹಾಗೆ ಕರಿಬಾರದು. ಅದನ್ನ "ಸಭಾ ಮರ್ಯಾದೆ" ಅಂ...

ಮದುವೆ ಮತ್ತು ಹುಡುಗ

ಹತ್ತು ಹದಿನೈದು ವರ್ಷಗಳ ಹಿಂದೆ ಹೆಣ್ಣಿನ ಕಡೆಯವ್ರು. ಹುಡುಗ ಚೆನ್ನಾಗಿದಾನ? ಗುಣ ಚೆನ್ನಾಗಿದ್ಯ? ಸಿಗರೇಟ್ ಸೇದ್ತಾನ, ಕುಡಿತಾನ ಇಲ್ವ? ಕೆಲ್ಸ ಏನ್ ಮಾಡ್ತಾನೇ? ಹೊಲ ಜಮೀನ್ ಇದ್ಯಾ?  ನಮ್ ಮನೆ ಹುಡುಗೀನ ಕೊಟ್ರೆ ಚೆನ್ನಾಗ್ ನೋಡ್ಕೊಳ್ತಾನ? ಇಷ್ಟು ನೋಡೋರು...  ಈಗ ಎಷ್ಟು ಸಂಬಳ ಸಿಗುತ್ತೆ? ಲಕ್ಷ ಇದ್ಯ..? ಕಣ್ ಮುಚ್ಕೊಂಡು ಹೆಣ್ ಕೊಡಬಹುದು. ೨೦೧೬ರಲ್ಲಿ ಹಾಗಿತ್ತು.. ಈಗ ೨೦೨೪ರಲ್ಲಿ.. ಹುಡುಗ ದುಡ್ಡು ಮಾಡಿದಾನ.. ಸೈಟ್ ಇದಾವ.. ಕೊಡು ಹೆಣ್ಣು..