Posts

Showing posts from December 11, 2016

ರೋಗ

ಇತ್ತೀಚೆಗೆ ಎಂಥವರಿಗೂ ಸಹ "ಮಧು ಮೇಹ" ಬರುತ್ತೆ.  ಅದು ಯಾವ "ಜನ್ಮದ ಪಾಪದ ಫಲ".? ಯಾವ ಅಪ್ಪ ಅಮ್ಮ ಮಾಡಿದ ಪಾಪದ ಫಲ. ? ಪಾಪಗಳಿಗು, ರೋಗಗಳಿಗು, ಸಾವುಗಳಿಗು ಜನ್ಮಾಂತರಗಳ ಲಿಂಕ್ ಯಾಕೆ? ಮಾಡೋಕ್ ಕೆಲ್ಸ ಇಲ್ದೆ..

ಲಕ್ಷ್ಮಿ

"ಕಾಸ್" ಕರ್ಚ್ ಮಾಡ್ಕೊಂಡು ಪೂಜೆ ಮಾಡಿದ್ರೆ "ಲಕ್ಷ್ಮಿ" ಒಲಿತಾಳ?!

Mukhavada

ಇಲ್ಲಿ ಎಲ್ಲರೂ ಮುಖವಾಡ ಧರಿಸಿದವರೆ. ಎಲ್ಲರೂ ಫೋಟೋಶಾಪ್ ಪ್ರಿಯರೇ. ಬೆಳಿಗ್ಗೆದ್ದು ಯಾರು ತನ್ನ ಕೆದರಿದ ಕೂದಲು, ಮುಖ ತೊಳೆಯದ ತನ್ನ ಚಿತ್ರ ಪೋಸ್ಟ್ ಮಾಡ್ತಾರೋ ಅವ್ರೇ ಮುಖವಾಡವಿಲ್ಲದವ್ರು. ಅಂತವ್ರು ಸ...

Dose

ಎಲ್ಲರ ಮನೆ ದೋಸೆನೂ ತೂತೇ, ಆದ್ರೆ ಟೇಸ್ಟ್ ಡಿಫೆರೆಂಟ್ ಇರುತ್ತೆ.

Hesru

ನಿಮ್ ಹೆಸ್ರೇನು? ಏನ್ ಕೆಲ್ಸ ಮಾಡ್ತೀರ.? "ಪೂಜಾ ರೀ"

ಜರ್ನಿ

ಜೀವನವೆಂಬ ರಸ್ತೆಲಿ ಆಗಾಗ 'ಹಂಪ್ಸ್' ಸಿಗೋದು ಸಹಜ. ಎಡವೋದು ಸಹಜ. ಎಲ್ಲವನ್ನೂ ಬೆನ್ನು ತಿರುಗಿಸದೆ ಎದುರುಗೊಂಡು, ದಾಟಲೇ ಬೇಕಾದ ಅನಿವಾರ್ಯತೆ. Happy Journey <3

ಕಮಿಟ್ಮೆಂಟ್

'ಕಮಿಟ್ಮೆಂಟ್' ಎಂಬುದು ಇರ್ಲಿಲ್ಲ ಅಂದ್ರೆ ಪ್ರತಿಯೊಬ್ರು ಅಲೆಮಾರಿ ಗಡ್ಡಪ್ಪನೇ.

ಹೊಸ ದೇವ್ರು

ಈಗ ಹೊಸ ದೇವ್ರು ಬಂದಿವೆ. ಮೊಬೈಲ್ ಮಾರಮ್ಮ, ಫೋನೇಶ್ವರಿ, ಸೆಲ್'ಫೋನಮ್ಮ, ಮೊಬೈಲ್ ಸ್ವಾಮಿ. ದಿನ ಬೆಳಿಗ್ಗೆದ್ದು ಇವುಗಳನ್ನೆ ಅಲ್ವಾ ನೋಡೋದು.? ಆದಷ್ಟು ಬೇಗ "ಗುಡಿ" ಕಟ್ಟಿ ಕೈಮುಗಿದು ಅಡ್ಬಿಳಿ, ಮೊಬೈಲಮ್ಮ ನ...

ಲವ್ ಫೇಲ್

ಲವ್ ಫೇಲ್ ಆಗಿ ಕುಡಿದು ಹಾಳಾದವನನ್ನು "'ಗುಂಡಿ'ಗೆ ಬಿದ್ದವನು" ಎನ್ನಬಹುದು.

ಸತ್ಯ

ಸತ್ಯ ಒಪ್ಕೊಳ್ಳೋ ಮನಸ್ಸುಗಳು ಇಲ್ದಾಗ. ಇರೋ ವಿಷ್ಯ ಹೇಳಿದ್ರೆ ಎಲ್ರೂ ವಿಲ್ಲನ್ನೇ.

ಸಾಯ್ತಾರೆ

ಸಾವು ಅನ್ನೋದು ಎಲ್ರಿಗೂ ಇಷ್ಟ. ಕೆಲವ್ರು ಹುಡುಗಿ ಹಿಂದೆ ಬಿದ್ದು "ಸಾಯ್ತಾರೆ" ಹುಡುಗಿ ಕೈ ಕೊಟ್ರೆ ಕುಡ್ದು ಕುಡ್ದು "ಸಾಯ್ತಾರೆ" ಕೆಲ್ಸ ಇಲ್ದೆ ರೋಡ್ ರೋಡಲ್ಲೇ "ಸಾಯ್ತಾರೆ' ಜಗಳ ಆಡ್ಕೊಂಡ್ "ಸಾಯ್ತಾರೆ" ಕ...

ತರಂಗ

ಪ್ರಶಾಂತವಾದ ಸರೋವರಕ್ಕೆ ಕಲ್ಲೆಸೆದು "ತರಂಗಗಳು" ಏಳಬಾರದು ಅಂದ್ರೆ ಹೇಗೆ?

ಊಟ

ಹೊತ್ ಹೊತ್ಗೆ ಸರಿಯಾಗಿ ಊಟ ಮಾಡಿ, ಇಲ್ಲಾಂದ್ರೆ Body ಬಾಡಿ ಹೋದಾತು. ;)

ದೃಷ್ಟಿಕೋನ

ಒಂದೇ ದೃಷ್ಟಿಕೋನದಿಂದ ಯಾವುದೇ ವಿಚಾರವನ್ನ ನೋಡ್ದಾಗ, ಅದು ಖಂಡಿತ ತಪ್ಪಾಗೇ ಇರುತ್ತೆ‌ . ಸಮಾನತೆ, ನಿಜಕ್ಕೂ ಸಮಾಜಿಕ ಕಳಕಳಿ ಇರುವಂತವರು 360° ಕೋನದಿಂದಲೂ ನೋಡ್ತಾರೆ‌. ಆ ನಡೆ ತಪ್ಪಾಗಿರಲಾರದು.

Abt pm nd kaveri issues

ಮಾತಾಡೋನ್ನ ನಂಬ್ಕೊಂಡ್ರೆ ಕುಡಿಯೋಕೆ ನೀರೂ ಸಿಗಲ್ಲ. ಹೊಸ ಗಾದೆ.

ಹೆಗಲು

ಕಷ್ಟದಲ್ಲಿದ್ದಾಗ ಕೈ ಕೊಡೋರಿಗಿಂತ, ಹೆಗಲು ಕೊಡೋರು ಬೇಕು.

ಖುಷಿ

ಬದುಕಿನ ದೊಡ್ಡ ಖುಷಿ ಏನಂದ್ರೆ ಶನಿವಾರ, ಭಾನುವಾರ ರಜೆ ಸಿಗೋದು. ಆ ಎರಡೂ ದಿನ ಪಾರ್ಟಿ, ಸುತ್ತಾಟ ಮಾಡ್ತಾ ಒಳ್ಳೆಯ ಸಿನಿಮಾ ನೋಡಿ, ಕೆಲವು ಬುಕ್ಸ್ ಓದಿ ಸಾರ್ಥಕ ಮಾಡ್ಕೊಳ್ಳೋದು.  .:P

Prakash Rai

ಜನಶ್ರೀಯವ್ರು "ದೊಡ್ಡ ರಾಮಾಯಣ" ಮಾಡಿ, "ಇದೊಳ್ಳೆ ರಾಮಾಯಣ"ಕ್ಕೆ ಬಿಟ್ಟಿ ಪ್ರಮೋಷನ್ ಕೊಟ್ರು.

ಮಾತು

ಮಾತು ಮನೆ ಮಾತ್ರ ಕೆಡ್ಸಲ್ಲ, ಸಿನಿಮಾನೂ ಕೆಡ್ಸುತ್ತೆ. Abt dana kayonu

Majaa Talkies

ಮಜಾ ಟಾಕೀಸಲ್ಲಿ ಸೃಜನ್ "ಮಚ್ ಕೊಡ್ರೋ" ಅಂತಾರಲ್ಲ. ವಾಪಸ್ಸು  "ಹೇ, ಗನ್ ಕೊಡ್ರೋ" ಅಂತ ಕೌಂಟ್ರು ಕೊಡ್ಬೇಕು. ಆಗ್ಲೇ ಸೃಜನ್ ಸುಮ್ನಾಗೋದು. : P

Roaring Star

ನಿಜಕ್ಕೂ Roaring Stars ಯಾರಂದ್ರೆ, ಗೊರಕೆ ಹೊಡಿಯೋರು. ! : P

ನರಕ

'ನರಕ'ದ ಮುಂದೆ ಬರೆದ ಸಾಲು: ನಿಮ್ಮೆಲ್ಲಾ ತಪ್ಪುಗಳ ಹೆಬ್ಬಾಗಿಲು. ;)

ಆನೆ ಭಾರ

ಮನುಷ್ಯ ಮನುಷ್ಯನ್ನ ಲಿಫ್ಟ್ ಮಾಡ್ತಾನೆ.‌ ಹಾಗೆ ಒಂದು ಆನೆ ಇನ್ನೊಂದು ಆನೇನ ಲಿಫ್ಟ್ ಮಾಡಿರೋ ಉದಾಹರಣೆ ಇದೆಯಾ.?

ಗಿಫ್ಟ್

ಈ ವರ್ಷ ಹಬ್ಬಕ್ಕೆ ಯಾರ್ಗಾದ್ರು ಗಿಫ್ಟ್ ಕೊಡೋದಾದ್ರೆ "ಸ್ಯಾಮ್ಸಂಗ್ ನೋಟ್ ೭" ಕೊಡ್ಸಿ. ಹಬ್ಬಕ್ಕೆ ಗಿಫ್ಟ್ ಕೊಟ್ಟಂಗೂ ಇರ್ಬೇಕು. ಬ್ಯಾಟರಿ ಬ್ಲ್ಯಾಸ್ಟ್ ಆದ್ರೆ ದೀಪಾವಳಿಲಿ ಪಟಾಕಿ ಹೊಡ್ದಂಗೂ ಇರ್ಬೇಕ...

ಕಿವಿ

ಕಣ್ಣಿಲ್ಲದವರಿಗೆ ಕಿವಿನೇ ಕಣ್ಣು.

ಸ್ವರ್ಗ

ಮನೆಗೆ ಇನ್ನೊಂದು ಹೆಸರು "ಸ್ವರ್ಗ". <3

Pataki sound

ಐ ಹೇಟ್ ಪಟಾಕಿ ಸೌಂಡ್.. :/

ಕುಂಬಳಕಾಯಿ

ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲ ಮೇಲಿರೋ ಕುಂಬಳಕಾಯಿನ ಹೊಡ್ದಾಕಿದನಂತೆ. !! *ಯುಗಾದಿ, ದೀಪಾವಳಿಗೆ ಅದೆಷ್ಟು ವೇಸ್ಟ್ ಮಾಡಿದ್ರೋ.

ಹಾಲಿನ ಸ್ನಾನ

ಇವತ್ತು ಆಫೀಸಲ್ಲಿ. ಕೆಲ್ಸ ಮುಗಿದಮೇಲೆ ಮೊಬೈಲಲ್ಲಿ ಹೆಡ್ ಫೋನ್ ಹಾಕ್ಕೊಂಡು ಬಿಗ್ಬಾಸ್ ನೋಡ್ತಿದ್ದೆ. ಸ್ವಯಂವರ: ಭುವನ್: ಯುವರಾಣಿನ ಮದ್ವೆ ಆದ್ರೆ 'ಮಗು' ಥರ ನೋಡ್ಕೋತಿನಿ.!? ಯುವರಾಣಿ ಸಂಜನಾ: ಮಗು ಥರ ಅಂದ್...

ನೋಟ್

ಇಷ್ಟೂ ದಿನ ನೀರನ್ನು ಮಿತವಾಗಿ ಬಳಸಿ ಅಂತಿದ್ವಿ, ಈಗ "ನೂರರ" ನೋಟನ್ನು ಮಿತವಾಗಿ ಬಳಸಿ. ಅನ್ಬೇಕಿದೆ. #NoteThisPoint

ಚಂದ್ರ

ಪ್ರತಿ ಮಗುವಿನ ಮಾಮ ಎಲ್ಲಾ ಅಮ್ಮಂದಿರ ತಮ್ಮ ; ಚಂದಮಾಮ!!

ಹಣ

ಧನಾರ್ದನ್ ರೆಡ್ಡಿ.

ಸುದ್ದಿಕೊಡೋರು ರಜನಿ ಫ್ಯಾನ್ಸ್

ಸುದ್ದಿಕೊಡೋರು ರಜನಿ ಫ್ಯಾನ್ಸ್ ಮರ್ರೆ. ಯಾರಾದ್ರು ಒಂದು ಏಟ್ ಹೊಡೆದಿರೋ ವೀಡಿಯೋ ಸಿಕ್ರೆ. ಅದನ್ನೆ ನೂರು ಸಲ ತೋರ್ಸಿ ನೂರು ಏಟ್ ಹೊಡುಸ್ತಾರೆ‌. ಯಾರಾದ್ರು ಸತ್ರೂ ಅಷ್ಟೇ, ನೂರು ಸಲ ಸಾಯಿಸ್ತಾರೆ‌‌. ಬದ...

ಬಿಗ್ಬಾಸ್

ಬಿಗ್ಬಾಸಲ್ಲಿ ಪ್ರಥಮ್'ನ ನೋಡ್ದಾಗ ಸೆಲೆಬ್ರಿಟಿಗಳೆಲ್ಲಾ ಏನ್ ಅಂದ್ಕೊಂಡಿರಬಹುದು. "ಓಹ್,  ಈ ಮೆಂಟಲ್ ಜೊತೆ ನಾವೂ ಫೋಟೋ ತೆಗುಸ್ಕೊಂಡಿದಿವಿ".!! &#128514;&#128514;&#128514;

ರೇಖೆ

ಕೈಯಲ್ಲಿರೋ ರೇಖೆಗಳಂತೆ ಗಂಡ ಹೆಂಡತಿ ಸಾಯೋವರೆಗೂ ಜೊತೆಗೆ ಇರೋ ಹಾಗಿದ್ರೆ. ಡಿವರ್ಸ್ ಯಾಕೆ ಆಗ್ತಿವೆ?

ಹ್ಯಾಪಿನೆಸ್

ಹ್ಯಾಪಿನೆಸ್ ಅಂದ್ರೆ ಮಕ್ಳು ಅಳ್ತಾ ಇದ್ರೆ ಅವುಗಳ ಜೊತೆ ನಾವೂ ಅಳೋ ನಾಟಕ ಮಾಡೋದು.‌

ಚದಂಬರಂ

ಕುಡಿದಿರೋ ಚಿದ ಎಂಬಾ ವ್ಯಕ್ತಿಗೆ ಆಕಾಶದಲ್ಲಿ ತೇಲಾಡ್ತಾ ಇದಿನಿ ಅನ್ಸುತ್ತೆ ಯಾಕಂದ್ರೆ. ಅವನ ಹೆಸರು ಚಿದಅಂಬರRum

ಭಗ್ನ ಪ್ರೇಮಿಗಳು ಹುಡುಗೀರಲ್ಲೂ ಇದಾರೆ

ಸಮಚಿತ್ತದಿಂದ ಬರದೆ ಇರೋ ಕೃಷ್ಣನಿನಾಗಿ ಕಾಯೋ "ರಾಧೆ".. ದುಷ್ಯಂತನಿಗಾಗಿ ಕಾಯೋ ಶಕುಂತಲಾ.(ಒಂದಾದ್ರು) ಕಿಶೋರ್ ಕುಮಾರ್ ಪ್ರೀತಿಗಾಗಿ ಪರಿತಪಿಸೋ 'ಮಧುಬಾಲ' ಅಮಿತಾಭ್ ಬಚ್ಚನ್'ಗೆ ಈಗಲೂ ಕಾಯ್ತಿರೋ 'ರೇಖಾ' ನಿ...

ಅವಶ್ಯಕತೆ vs ಅನಾವಶ್ಯಕತೆ

ನಮ್ಮ ಅವಶ್ಯಕತೆ ಇಲ್ಲದವರ ಜೊತೆ ಅನಾವಶ್ಯಕವಾಗಿ ಇರಬಾರದು..

ಕೂದಲು

ಬಿಳಿ ಕೂದಲು ಕಿತ್ರೆ ಜಾಸ್ತಿ ಆಗ್ತವೇ ಅಂತ ಹೇಳ್ತಾರಲ್ಲ. ಹಾಗೆ ಕಪ್ಪು ಕೂದಲು ಕಿತ್ರೆ ಕರಿ ಕೂದಲು ಜಾಸ್ತಿ ಆಗ್ಬೇಕಲ್ವ? &#128514;&#128514;

ಶೆಟ್ರಂಗಡಿ

ಶೆಟ್ರಂಗಡಿಯವರು ಶುಕ್ರವಾರ ಸಾಲ ಕೊಡಲ್ಲ, ಕಾಸೂ ಕೊಡಲ್ಲ. ಒಟ್ನಲ್ಲಿ ಈ ದಿನ ಲಕ್ಷ್ಮಿನ ಹೊರೆಗೆ ಕಳ್ಸಲ್ಲ. ಆದ್ರೂ ಅವ್ರ್ಯಾಕೆ ಅಂಬಾನಿ ಆಗಿಲ್ಲ?!

ನೋಟ್ this point

ಲಕ್ಷ್ಮಿನ (ಹಣ) ತುಳುದ್ರೆ. ಅಯ್ಯೋ ತಪ್ಪಾಯ್ತಮ್ಮ ಅಂತ ಕಣ್ಣಿಗೊತ್ಕೊಂಡವರೇ ಸಾವಿರ ನೋಟ್ ಬ್ಯಾನ್ ಆದ ದಿನವೇ ಟಾಯ್ಲೆಟ್ ಪೇಪರ್ ಮಾಡಿಬಿಟ್ರು. ಪಟ್ಣ ಕಟ್ಟಿ ಮಿರ್ಚಿ ಮಂಡಕ್ಕಿ ಮಾಡಿರೋ ಫೋಟೋನ ಶೇರ್ ಮಾಡಿ...

"ಮಮ್ಮಿ save me" movie nodovaaga ansiddu

ದುಡ್ ಕೊಟ್ಟು ಭಯ ಪಡೋದು ದೆವ್ವದ ಸಿನಿಮಾ ನೋಡೋವಾಗ‌..

ಮೊಬೈಲ್ ಹುಡುಗ್ರು

ಡಿಯರ್ ಬಾಯ್ಸ್ ರೋಡ್ ರೋಡಲ್ಲೂ ತಲೆತಗ್ಗುಸ್ಕೊಂಡು ಮೊಬೈಲ್ ನೋಡ್ಕೊಂಡ್ ಓಡಾಡ್ಬೇಡಿ.‌ ಸುಂದರವಾದ ಹುಡುಗಿಯರನ್ನ ಮಿಸ್ ಮಾಡ್ಕೊತೀರ. ಮಿಸ್ಸಸ್ ಆಗೋರು ಸಹ ಮಿಸ್ ಆಗಬಹುದು : P

ಸೈಕಲ್

ಸೈಕಲ್, ಹುಚ್ಚ ವೆಂಕಟ್'ಗೆ ಹೇಳಿದ್ದು: ನೀವು ನನ್ನ ತುಳಿತಾ ಇದಿರ‌..

Cochi

ತಮಿಳುನಾಡಲ್ಲಿ ಅದೆಷ್ಟೇ ಮಳೆ ಬಂದ್ರು Cochi ಕೊಂಡು ಹೋಗಲ್ಲ..

ಟಾಯ್ಲೆಟ್

ಫಾರಿನ್ನಲ್ಲಿ ಸಂಡಾಸ್'ಗೆ ಪೇಪರ್ ತಗೊಂಡು ಹೋಗ್ತಾರೆ. ಓದಕೆ. ಇಂಡಿಯನ್ಸ್ ಪೇಪರ್ ಓದೋ "ಕೆಟ್ಟ" ಹವ್ಯಾಸ ಇಲ್ವಲ್ಲ ಅದ್ಕೆ ಮೊಬೈಲ್ ತಗೊಂಡು ಹೋಗ್ತಾರೆ

ಸಿನಿಮಾ ಭಯ

ದುಡ್ ಕೊಟ್ಟು ಭಯ ಪಡೋದು ದೆವ್ವದ ಸಿನಿಮಾ ನೋಡೋವಾಗ‌..

ಬೆಂಗಳೂರಿಗರು

ಬೆಂಗಳೂರಿಗರೆಂದರೆ, ಕಾರಲ್ಲಿ ಕಸ ತಂದು ರಸ್ತೆ ಮೂಲೇಲಿ ಎಸೆದು ಹೋಗೋರು.

ನ್ಯೂನತೆ

ಯಾವುದೇ ವ್ಯಕ್ತಿಯ ನ್ಯೂನತೆಗಳ ನಡುವೆಯೂ ಮನುಷ್ಯ ಪ್ರೀತಿಸುವುದ ಕಲಿಬೇಕು.