ಮಂತ್ರ ಮಾಂಗಲ್ಯ

ಚಿಕ್ಕ ವಯಸ್ಸಿಗೆ ಊರು ಬಿಟ್ಟು ಬೇರೆ ಊರಿನ ಹಾಸ್ಟೆಲ್ ಸೇರ್ಕೊಂಡೆ. ಮತ್ತೆ ಹೈಸ್ಕೂಲ್ ಆದ್ಮೇಲೆ ಬೆಂಗಳೂರು ಸೇರ್ಕೊಂಡೆ. ಸೋ ಹಳ್ಳಿ ಲೈಫು, ಫ್ರೆಂಡ್ಸು ಎಲ್ಲರ ಸಂಪರ್ಕನೂ ತಪ್ಪಿ ಹೋಯ್ತು.

೨೦೧೧ರಲ್ಲಿ ಸ್ಕೂಲ್ ಫ್ರೆಂಡ್ಸ್'ಗಳನ್ನ ಹುಡುಕ್ಕೊಂಡು ಹೋಗಿದ್ದೆ. ಏಳ್ನೇ ಕ್ಲಾಸಲ್ಲಿ ೧೨೫+ ಜನ ಇದ್ರು. ಹತ್ನೇ ಕ್ಲಾಸಲ್ಲಿ ೧೨೦+ ಜನ ಇದ್ರು.  ಕೆಲವ್ರನ್ನ ಹುಡುಕಿದೆ, ಸಂಪರ್ಕಕ್ಕೆ ಸಿಕ್ರು. ಆಗ ನಾನು ಮದುವೆ ಆದ್ರೆ ಅಷ್ಟೂ ಸ್ಕೂಲು, ಕಾಲೇಜ್ ಗೆಳೆಯರನ್ನ ಕರೀಬೇಕು ಅನ್ಸಿತ್ತು.

ಮುಂದೆ ಸಾಹಿತಿ ಕವಿರಾಜ್ 'ಮಂತ್ರ ಮಾಂಗಲ್ಯ'ದ ರೀತಿಲಿ ಮದುವೆ ಆದಾಗ, ಆ ಮದುವೆ ನನಗೆ ತುಂಬಾ ಪ್ರಭಾವ ಬೀರಿತು. ಆಡಂಬರದ ಮದುವೆ ಬೇಕಾಗಿಲ್ಲ ಅನ್ಸೋಕೆ ಶುರುವಾಗಿ. ಮಂತ್ರ ಮಾಂಗಲ್ಯದ ರೀತಿಲೇ ಮದುವೆ ಆಗೋಣ ಅಂತ ಫಿಕ್ಸ್ ಆದೆ. ಮೊನ್ನೆ ನವೆಂಬರ್ ಒಂದನೇ ತಾರೀಖು ಕವಿರಾಜ್ ಸಿಕ್ಕಿದ್ರು. ಆಗ ನಿಮ್ಮ ರೀತಿಲೇ ಮದುವೆ ಆಗ್ತೀನಿ ಸರ್ ಅಂತ ಹೇಳಿದೆ.

Comments

Popular posts from this blog

ಕ್ವಾರಂಟೈನ್ ಡೇಸ್..

ಸಾರ್ವಜನಿಕ ವೇದಿಕೆ ಮತ್ತು ಗೌರವ

ಹಿಂದಿ ಮತ್ತು ಪರಿಯೇರುಮ್ ಪೆರುಮಾಳ್